Kamalada Mogadole Lyrics in Kannada | ಕಮಲದ ಮೊಗದೋಳೆ ಸಾಂಗ್‌ ಲಿರಿಕ್ಸ್‌ ಕನ್ನಡ

0

Kamalada Mogadole Lyrics in Kannada ಕಮಲದ ಮೊಗದೋಳೆ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada

Kamalada Mogadole Lyrics in Kannada
Kamalada Mogadole Lyrics in Kannada | ಕಮಲದ ಮೊಗದೋಳೆ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಕಮಲದ ಮೊಗದೋಳೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕಮಲದ ಮೊಗದೋಳೆ ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾಮ್ಮಾ

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||

ಕಾವೇರಿ ನೀರ ಅಭಿಷೇಕಕಾಗಿ

ನಿನಗಾಗಿ ನಾ ತಂದೆನಮ್ಮ

ಕಂಪನ್ನು ಚೆಲ್ಲೊ ಸುಮರಾಶಿಯಿಂದ

ಹೂಮಾಲೆ ಕಟ್ಟಿರುವೆನಮ್ಮ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವಾ ತುಂಬುವಂತೆ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವ ತುಂಬುವಂತೆ 

ನಲಿಯುತ ಕುಣಿಯುತ ಒಲಿದು ಬಾ 

ನಮ್ಮ ಮನೆಗೆ ಬಾ || ೧ ||

ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ

ಮನೆಯನ್ನು ಬೆಳಕಾಗಿ ಮಾಡು

ದಯೆತೋರಿ ಬಂದು ಮನದಲ್ಲಿ ನಿಂತು

ಸಂತೋಷ ಸೌಭಾಗ್ಯ ನೀಡು

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಕರವನು ಮುಗಿಯುವೆ

ಆರತಿ ಈಗ ಬೆಳಗುವೆ || ೨ ||

ಇತರೆ ವಿಷಯಗಳು :

ಅಷ್ಟ ಲಕ್ಷ್ಮಿ ಅಷ್ಟೋತ್ತರ

ಜಯ ಭಾರತ ಜನನಿಯ ತನುಜಾತೆ ಸಾಂಗ್‌ ಲಿರಿಕ್ಸ್‌ ಕನ್ನಡ

Leave A Reply

Your email address will not be published.